Get In Touch
For support, privacy concerns, business inquiries, or feedback.
Get In Touch
For support, privacy concerns, business inquiries, or feedback.
THE 18points TEAM
(ABOUT US)
THE REAL STORY
“ನಾವು ಸೂಟ್-ಬೂಟ್ ಹಾಕಿಕೊಂಡು ಟಿವಿ ಚಾನೆಲ್‌ಗಳಲ್ಲಿ ಭಾಷಣ ಬಿಗಿಯುವ ವಾಲ್-ಸ್ಟ್ರೀಟ್ ಎಕ್ಸ್‌ಪರ್ಟ್‌ಗಳಲ್ಲ. ನಾವು ನಿಮ್ಮಂತೆಯೇ ಪ್ರತಿದಿನ ಮಾರ್ಕೆಟ್ ಟ್ರ್ಯಾಕ್ ಮಾಡುವ, ಬ್ರೋಕರೇಜ್ ಆಪ್‌ಗಳಲ್ಲಿ ಟ್ರೇಡ್ ಮಾಡುವ ಮತ್ತು ಕಾರ್ಪೊರೇಟ್ ಜಾರ್ಗನ್‌ಗಳಿಂದ ಬೇಸತ್ತಿರುವ ಸಾಮಾನ್ಯ ರಿಟೇಲ್ ಹೂಡಿಕೆದಾರರ ತಂಡ.”
TECH MEETS FINANCIAL ANALYSIS
“ಕಾಂಪ್ಲೆಕ್ಸ್ ಸಿಸ್ಟಮ್‌ಗಳನ್ನು ಬಿಲ್ಡ್ ಮಾಡುವ ಟೆಕ್ನಿಕಲ್ ಬ್ಯಾಕ್‌ಗ್ರೌಂಡ್ ನಮ್ಮದು. ಅದೇ ಆಟೊಮೇಷನ್ ಮತ್ತು ಲಾಜಿಕಲ್ ಥಿಂಕಿಂಗ್ ಬಳಸಿ, ಕಂಪನಿಗಳ ಅನ್ಯುವಲ್ ರಿಪೋರ್ಟ್, ಬ್ಯಾಲೆನ್ಸ್ ಶೀಟ್ ಮತ್ತು ಕ್ಯಾಶ್ ಫ್ಲೋ ಸ್ಟೇಟ್‌ಮೆಂಟ್‌ಗಳನ್ನು ಎಳೆಎಳೆಯಾಗಿ ಬಿಡಿಸಿ ವಿಶ್ಲೇಷಿಸುವುದು ನಮ್ಮ ಸ್ಟೈಲ್. ನಂಬರ್‌ಗಳ ಮಧ್ಯೆ ಅಡಗಿರುವ ಅಸಲಿ ದತ್ತಾಂಶ ಮತ್ತು ಆಡಿಟರ್ ರಿಮಾರ್ಕ್ಸ್‌ಗಳನ್ನು ಹುಡುಕುವ ಪಕ್ಕಾ ಫೊರೆನ್ಸಿಕ್ ಅಪ್ರೋಚ್ ನಮ್ಮದು.”
THE F&O FINFLUENCER TRAP
“ಇಂದು ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಅತಿ ದೊಡ್ಡ ತಪ್ಪು ದಾರಿ ಎಂದರೆ, ‘F&O ನಲ್ಲಿ ಒಂದೇ ದಿನಕ್ಕೆ ಲಕ್ಷ ಸಂಪಾದಿಸಿದೆ’ ಎಂದು ರೀಲ್ಸ್ ಮಾಡುವ ಫೇಕ್ ಫಿನ್‌ಫ್ಲುಯೆನ್ಸರ್‌ಗಳು. ಜನರಿಗೆ ಆಸೆ ಹುಟ್ಟಿಸಿ, ಫೇಕ್ ಸ್ಕ್ರೀನ್‌ಶಾಟ್ ತೋರಿಸಿ ಅವರ ಕಷ್ಟದ ದುಡ್ಡನ್ನು ಜೇಬಿಗಿಳಿಸುತ್ತಿರುವ ಈ ಟ್ರ್ಯಾಪ್ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಪ್ರಮುಖ ಉದ್ದೇಶ.”
THE TRANSPARENCY PROMISE
“ದೊಡ್ಡ ದೊಡ್ಡ ಇಂಗ್ಲಿಷ್ ವೆಬ್‌ಸೈಟ್‌ಗಳು ಮತ್ತು ಕಾರ್ಪೊರೇಟ್ ಅನಲಿಸ್ಟ್‌ಗಳು ಇಂತಹ ಡೀಪ್ ಫೊರೆನ್ಸಿಕ್ ರಿಪೋರ್ಟ್‌ಗಳಿಗೆ ಸಾವಿರಾರು ರೂಪಾಯಿ ಚಾರ್ಜ್ ಮಾಡುತ್ತಾರೆ. ಆದರೆ 18 Points ದಲ್ಲಿ ನಾವು ಪ್ರತಿಯೊಂದು ರಿಪೋರ್ಟ್‌ನ ಒರಿಜಿನಲ್ ಸೋರ್ಸ್ (Source) ಡಾಕ್ಯುಮೆಂಟ್ ಮತ್ತು ಎಕ್ಸಾಕ್ಟ್ ಪೇಜ್ ನಂಬರ್ (Page Number) ಸಮೇತ ಅನಾಲಿಸಿಸ್ ಕೊಡುತ್ತೇವೆ. ಇಲ್ಲಿ ಯಾವುದೇ ಮುಚ್ಚುಮರೆಯಿಲ್ಲ.”